ಮೂಡುಬಿದಿರೆ: ಜೀವರಕ್ಷಕನ ಜೀವಕ್ಕೆ ಆಸರೆಯಾಗಬೇಕಾಗಿದೆ. ಹೌದು. ಸುಕೇಶ್ ಎಂಬ ೨೯ವರುಷದ ಯುವಕ ಅನೇಕರ ಪಾಲಿಗೆ ಜೀವರಕ್ಷರೆಂದೇ ಗುರುತಿಸಲ್ಪಟ್ಟಿದ್ದರು. ನಾರಾವಿಯ ಈ ಯುವಕ ಮೂಡುಬಿದಿರೆಯ ಖಾಸಗೀ ಅಂಬ್ಯುಲೆನ್ಸ್ ಒಂದರ ಚಾಲಕ. ತನ್ನ ನಿಸ್ವಾರ್ಥ ಸೇವೆಯ ಮೂಲಕ ಅನೇಕ ಜೀವಗಳನ್ನುಳಿಸಿದ್ದಾರೆ. ಇತ್ತೀಚೆಗೆ ಅವರ ಮೊಣಕಾಲಿನಲ್ಲಿ ವಿಪರೀತ ನೋವು ಕಂಡು ಬಂದಿದ್ದು ತನ್ನೆರಡೂ ಕಾಲುಗಳ ಸ್ವಾಧೀನ ಕಳಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಇದೊಂದು ಅಪರೂಪದ ಖಾಯಿಲೆಯಾಗಿದ್ದು Gullian Barre syndrome ಎಂದು ತಿಳಿಸಿದ್ದಾರೆ. ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಖಾಯಿಲೆಯಿಂದ ಹೊರಬರಲು 3ಲಕ್ಷದ ಇಂಜೆಕ್ಷನ್ ಅಗತ್ಯವಿದೆ. ಆಸ್ಪತ್ರೆಯ ಖರ್ಚುವೆಚ್ಚಗಳು ಸೇರಿ 5ಲಕ್ಷ ರುಪಾಯಿಯ ತುರ್ತು ಅವಶ್ಯಕತೆಯಿದೆ. ಹೌದಾಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸುಕೇಶ್ ಪತ್ನಿ ಹಾಗು ನಾಲ್ಕು ವರ್ಷದ ಹೆಣ್ಣು ಮಗು ಹೊಂದಿದ್ದಾರೆ. ಉದಾರ ದಾನಿಗಳು ಇವರ ಸಹಾಯಕ್ಕೆ ನಿಲ್ಲಬೇಕಾಗಿದೆ.