ಮೂಡುಬಿದಿರೆ: ತಾಲೂಕಿನ ಹಲವು ಭಾಗಗಳಲ್ಲಿ ಸಾಯಂಕಾಲದಿಂದ ಉತ್ತಮ ಮಳೆಯಾಗಿದೆ. ಗುಡುಗು ಮಿಂಚಿನಬ್ಬರ ಜೋರಾಗಿತ್ತು. ರಾತ್ರಿಯ ವೇಳೆ ಹಗುರ ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ಬಿಸಿಲ ಝಳಕ್ಕೆ ಕಾದ ಭೂಮಿಗೆ ಮಳೆರಾಯನ ಆಗಮನ ತಂಪೆರೆದಂತಾಗಿದೆ. ಸಾಯಂಕಾಲ ಹಾಗೂ ರಾತ್ರಿ ಮಳೆ ಸುರಿದಿದ್ದು ವಾತಾವರಣ ಕೊಂಚ ತಣ್ಣಗಾಗುವಂತೆ ಮಾಡಿದೆ.