ಜಿದ್ದಾಜಿದ್ದಿನ ಚುನಾವಣೆಯಲ್ಲಿ ಹೊಸಮುಖದತ್ತ ಮತದಾರರ ಚಿತ್ತ!
ಮಂಗಳೂರು: ಅಕ್ಷರಶಃ ಚುನಾವಣೆಗೆ ಕ್ಷಣ ಗಣನೆ ಆರಂಭಗೊಂಡಿದೆ. ಮಂಗಳೂರು ನಗರ ಉತ್ತರ ಕ್ಷೇತ್ರ ರಾಜ್ಯದ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಮತ್ತೊಂದು ಕ್ಷೇತ್ರ. ಇಲ್ಲಿ ʻಹಿಂದುತ್ವʼದ ಅಜೆಂಡಾ ಪ್ರಬಲವಾಗಿದೆ. ಎಳವೆಯಿಂದಲೇ ಹಿಂದುತ್ವವನ್ನು ಕಣ ಕಣದಲ್ಲಿ ಆವಾಹಿಸಿಕೊಂಡಿರುವ, ಪ್ರಖರ ಹಿಂದುತ್ವ ವಾದಿ, ರಾಷ್ಟ್ರೀಯ ಚಿಂತಕ, ಶ್ರೀಕೂಸಪ್ಪ ಶೆಟ್ಟಿಗಾರ್ ಅವರ ಮೂಲಕ ನಾಲ್ಕನೇ ತರಗತಿಯಿಂದಲೇ ಆರ್‌ಎಸ್‌ಎಸ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಎನರ್ಜೆಟಿಕ್‌ಯೂತ್‌ಐಕಾನ್ ಸಂದೀಪ್‌ಶೆಟ್ಟಿ ಆಮ್‌ಆದ್ಮಿಯ ಮೂಲಕ ʻಸತ್ವ ಪರೀಕ್ಷೆಗೆʼ ಇಳಿದದ್ದು ಭಾರೀ ಚರ್ಚೆಗೆ ಕಾರಣವಾಗಿದೆ. 2018ರಲ್ಲಿ ಭಾರತೀಯ ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ನೂತನ ಎಂಟ್ರಿ ನೀಡಿದ ಭರತ್‌ಶೆಟ್ಟಿ ಈ ಬಾರಿಯೂ ಇದೇ ಕ್ಷೇತ್ರದಿಂದ ಅಕ್ಷರಶಃ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ ಭರತ್‌ಶೆಟ್ಟಿ ವರ್ಸಸ್‌ಸಂದೀಪ್‌ಶೆಟ್ಟಿ ಎಂಬ ವಾತಾವರಣ ಸೃಷ್ಟಿಯಾಗಿದೆ. ಮೂಲ ಹಿಂದುತ್ವದ ನಡುವೆ ರಣಕಣವೇರ್ಪಟ್ಟಿದೆ. ಹಿಂದುತ್ವ,ಬಿಜೆಪಿಯ ಹೆಸರಿನಲ್ಲಿ ಭರತ್‌ಶೆಟ್ಟಿ ನೇರ ಸ್ಪರ್ದೆಮಾಡಿದರೆ , ಕಣ ಕಣದಲ್ಲೂ ರಾಷ್ಟ್ರೀಯತೆ,ಗೋವು,ನಾರೀಶಕ್ತಿ,ಭಜನೆ,ಧಾರ್ಮಿಕ ಕಾರ್ಯಗಳ ನಿರಂತರ ಅನುಷ್ಠಾನ ಪ್ರೇರಣೆಯ ಮೂಲಕವೇ ಜನತೆಯೊಂದಿಗೆ ಗುರುತಿಸಿಕೊಂಡಿರುವ ಪಾದರಸದ ವ್ಯಕ್ತಿತ್ವದ, ಸಂದೀಪ್‌ಶೆಟ್ಟಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

234826 ಒಟ್ಟು ಮತಗಳಿರುವ ಈ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಅಖಾಡ ಏರ್ಪಟ್ಟಿದ್ದು, ಬಿಜೆಪಿಯ ಡಾ.ವೈ.ಭರತ್ ಶೆಟ್ಟಿ 98648 ಮತಗಳನ್ನು ಪಡೆದು ಜಯಭೇರಿ ಭಾರಿಸಿದ್ದರು. ಆದರೆ ಈ ಬಾರಿ ಬಿಜೆಪಿ ಹಾಗೂ ಆಮ್ ಆದ್ಮಿ ನಡುವೆ ನೇರ ಹಣಾಹಣಿ ಉಂಟಾಗಿದೆ.
ಇನ್ನೊಂದು ಗಮನಾರ್ಹ ಅಂಶವೆಂದರೆ ಸಂದೀಪ್‌ಶೆಟ್ಟಿ ಸ್ಪರ್ಧಿಸುವುದು ಆಮ್‌ಆದ್ಮಿ ಪಕ್ಷವಾದರೂ, ಎಲ್ಲೂ ಕೇಜ್ರಿವಾಲ್‌ಆಗಲೀ, ಆಮ್‌ಆದ್ಮಿ ಮುಖಂಡರ ವರ್ಚಸ್ಸಿನಲ್ಲಾಗಲಿ ಇವರ ಸ್ಪರ್ಧೆಯಿಲ್ಲ!. ಬದಲಾಗಿ, ತನ್ನೂರು, ತನ್ನಜನ,ಕ್ಷೇತ್ರಾಭಿವೃದ್ಧಿ, ವಿಶಾಲ ದೃಷ್ಟಿಕೋನ, ಹೊಸಚಿಂತನೆಗಳ ಹಾದಿಯೇ ಇವರ ಅಜೆಂಡಾ! ಊರಿನ ಇಂಚಿಂಚು ಜಾಗದ ಪರಿಚಯ ಇರುವ ಸಂದೀಪ್‌ಶೆಟ್ಟಿ ಭವಿಷ್ಯದ ದೂರದೃಷ್ಟೀ ಚಿಂತನೆಯೊಂದಿಗೆ ಕಾರ್ಯಾನುಷ್ಠಾನಕ್ಕೆ ಸಜ್ಜಾಗಿದ್ದಾರೆ. ಕೇವಲ ಚುನಾವಣೆಯೆಂಬುದು ಒಂದು ʻಟೂಲ್ʼ, ಈ ಮೂಲಕ ಸರಕಾರದ ಅನುದಾನದೊಂದಿಗೆ ನಮ್ಮ ಚಿಂತನೆಗಳನ್ನು ಬಳಸಿ ಕ್ಷೇತ್ರಾಭಿವೃದ್ಧಿಯ ಹೊಸ ನಕಾಶೆಯನ್ನು ರೂಪಿಸಿಕೊಳ್ಳಲು ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.
ನೇರ ಹಣಾಹಣಿ: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಭರತ್‌ಶೆಟ್ಟಿ ಮತ್ತು ಸಂದೀಪ್‌ಶೆಟ್ಟಿ ಮಧ್ಯೆ ನೇರ ಹಣಾಹಣಿ. ಇದು ಹಿಂದುತ್ವದ ನೆಲೆಯಲ್ಲಿ ನಡೆಯುವ ಹೋರಾಟವೆಂಬಂತೆ ಭಾಸವಾಗುತ್ತಿದೆ. ಜಾತಿ ರಾಜಕಾರಣವೂ ಒಂದರ್ಥದಲ್ಲಿ ಇಲ್ಲಿ ನಡೆದರೆ ಅಚ್ಚರಿಯೇನಲ್ಲ. ಇವರಿಬ್ಬರ ಹೋರಾಟದ ಮಧ್ಯೆ ಕಾಂಗ್ರೆಸ್‌ಹಾಗೂ ಜೆಡಿಎಸ್‌ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ! ಸಂದೀಪ್‌ಶೆಟ್ಟಿ ದೃಢ ನಿರ್ಧಾರ ಮಾಡಿ ಕಣದಲ್ಲುಳಿಯುವ ಮೂಲಕ ಉತ್ತರ ಕ್ಷೇತ್ರದಲ್ಲಿ ನೇರ ಹಣಾಹಣಿ ಏರ್ಪಾಡಾಗಿದೆ. ಆಮ್ ಆದ್ಮಿಯ ಸಂದೀಪ್ ಅಖಾದಲ್ಲಿ ಏನೂಅಲ್ಲ ಎಂಬ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಲೆಕ್ಕಾಚಾರವನ್ನು ಸಂದೀಪ್ ಎಂಬ ಬಿಸಿರಕ್ತದ ಯುವಕ ತಲೆಕೆಳಗೆ ಮಾಡುವುದರಲ್ಲಿ ಸಂಶಯವೇ ಇಲ್ಲ!
ಮೆಗಾ ಪ್ಲಾನ್!: ಸಂದೀಪ್‌ಶೆಟ್ಟಿ ಚುನಾವಣೆಗೆಯ ದೃಷ್ಟಿಯಿಂದ ಹೊಸಮುಖವಾದರೂ ಸಂಘಟನಾ ಚತುರ. ಯಾವೊಂದು ಜವಾಬ್ದಾರಿಯನ್ನು ಕೊಟ್ಟರೂ ಸಮರ್ಥವಾಗಿ ನಿರ್ವಹಿಸುವ ತಾಕತ್ತುಹೊಂದಿದವರು. ತನ್ನೂರನ್ನು ಒಂದು ಮಾದರಿಯಾಗಿ ಪರಿವರ್ತಿಸುವ ಕನಸು ಹೊತ್ತವರು. ಹಳ್ಳಿ ಹಳ್ಳಿಗಳನ್ನು ಸುತ್ತಿ, ಸಮಸ್ಯೆಗಳನ್ನು ಅರ್ಥೈಸಿ, ಅದಕ್ಕೊಂದು ಪರಿಪೂರ್ಣ ಪರಿಹಾರ ದೊರಕಿಸಲೇಬೇಕೆಂಬ ದಿಟ್ಟ ನಿರ್ಧಾರಮಾಡಿದವರು. ಮುಂದಿನ 25ವರುಷಗಳ ದೂರದೃಷ್ಟೀ ಚಿಂತನೆಯೊಂದಿಗೆ, ಕ್ಷೇತ್ರಾಭಿವೃದ್ಧಿಯ ರೂಪುರೇಶೆಗಳನ್ನು ಸಿದ್ಧಪಡಿಸಿಕೊಂಡವರು. ʻಮೆಗಾ ಮಾಸ್ಟರ್‌ಪ್ಲಾನ್ʼ ರಚಿಸಿ, ಅದರ ಅನುಷ್ಠಾನಕ್ಕಾಗಿ ಮತದಾರರ ಮುಂದೆ ಹೋಗುತ್ತಿದ್ದಾರೆ.
ಪ್ರತಿಯೊಂದು ಮನೆಯಲ್ಲೂ ಶುದ್ಧ ಕುಡಿಯುವ ನೀರಿರಬೇಕು, ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂಬ ಸತ್‌ಚಿಂತನೆ ಇವರದ್ದು. ನಿರಾಶ್ರಿತರಿಗೆ, ಅಬಲೆಯರಿಗೂ ʻಬದುಕುವ ಹಕ್ಕಿದೆʼ. ಅವರೆಲ್ಲರನ್ನು ಮುಖ್ಯವಾಹಿನಿಗೆ ಕರೆತರುವ ಚಿಂತನೆಯಿರಿಸಿದ್ದಾರೆ. ಸರಕಾರೀ ಕಛೇರಿಗಳಲ್ಲಿರುವ ಭ್ರಷ್ಟಾಚಾರಗಳನ್ನು ಅಳಿಸಿ, ಜನಸ್ನೇಹೀ ಆಡಳಿತ ವ್ಯವಸ್ಥೆ ರೂಪಿಸುವ ಕನಸು ಹೊತ್ತಿದ್ದಾರೆ. ಮೂಲ ಸೌಕರ್ಯಕ್ಕೆ ವಿಶೇಷ ಒತ್ತು ನೀಡುವುದರ ಜೊತೆಗೆ ಸುಸಜ್ಜಿತ ಹೈಟೆಕ್‌ಬಸ್‌ನಿಲ್ದಾಣ, ಗ್ರಾಮೀಣ ಬಸ್‌ವ್ಯವಸ್ಥೆ, ಪ್ರಯಾಣಿಕರ ತಂಗುದಾಣಗಳನ್ನು ʻಭದ್ರತಾ ಸಿ.ಸಿ. ಕಣ್‌ಗಾವಲಿನೊಂದಿಗೆʼ ನಿರ್ಮಿಸಲು ಯೋಚಿಸಿದ್ದಾರೆ.
ಈಗಿರುವ ಸರಕಾರೀ ಶಾಲೆ ಹಾಗೂ ಅಂಗನವಾಡಿಗಳನ್ನು ಅಭಿವೃದ್ಧಿ ಪಡಿಸಿ, ಗುಣಮಟ್ಟದ ಶಿಕ್ಷಣ ನೀಡುವುದು, ಸರಕಾರೀ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಿಕೊಡುವುದು, ಕ್ಷೇತ್ರದಲ್ಲಿ ಸರ್ಕಾರೀ ಮೆಡಿಕಲ್‌ಕಾಲೇಜು ಸ್ಥಾಪನೆಯ ಗುರಿ ಇವರದ್ದಾಗಿದೆ.
ಸುಸಜ್ಜಿತ ಕ್ರೀಡಾಂಗಣ, ಸೂಕ್ತ ಒಳಚರಂಡಿ ವ್ಯವಸ್ಥೆ, ಜಲಮೂಲಗಳ ಸಂರಕ್ಷಣೆ, ಕುಡಿಯುವ ನೀರಿನ ಯೋಜನೆಗೆ ವಿಶೇಷ ಆದ್ಯತೆ, ಹೈಟೆಕ್‌ರಸ್ತೆ, ಸೈಕಲ್‌ಪಾಥ್, ಚರಂಡಿ ವ್ಯವಸ್ಥೆ, ಇವೆಲ್ಲದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಯನ್ನು ಸಮರ್ಥವಾಗಿ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸುವಂತೆ ಮಾಡುವ ದಿಟ್ಟ ನಿರ್ಧಾರ ಇವರದ್ದು.
ʻಅಪ್ಪೆಭಾಷೆʼತುಳುವಿಗೆ ವಿಶೇಷ ಪ್ರಾತಿನಿಧ್ಯ ನೀಡುವುದರ ಜೊತೆಗೆ, ಹೋಬಳಿಗಳಲ್ಲೂ ಭದ್ರತೆಗಾಗಿ ಪೊಲೀಸ್‌ಔಟ್‌ಪೋಸ್ಟ್‌ನಿರ್ಮಾಣದ ಗುರಿಹೊಂದಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ನಿಟ್ಟಿನಲ್ಲಿ ಎನ್.ಐ.ಟಿ.ಕೆ, ಎಂ.ಆರ್.ಪಿ.ಎಲ್, ಎಸ್.ಇ.ಝೆಡ್, ಎನ್.ಎಂ.ಪಿ.ಟಿ ಮೊದಲಾದ ಕಡೆಗಳಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯಕ್ಕೆ ಶ್ರಮ ವಹಿಸುವ ಇರಾದೆಯಿದೆ. ಕೈಗಾರಿಕಾ ವಲಯದ ಸರ್ವತೋಮುಖ ಅಭಿವೃದ್ಧಿಯ ಜೊತೆಗೆ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಚಿಂತಿಸಿದ್ದಾರೆ. ಮೀನುಗಾರ ಕುಟುಂಬದ ಆಧಾರಕ್ಕೆ ಒತ್ತು ನೀಡಿದ್ದು, ಢಕ್ಕೆ ನಿರ್ಮಾಣ, ಮಾರುಕಟ್ಟೆ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಯೋಜನೆ ರೂಪಿಸಿದ್ದಾರೆ. ತುಳುನಾಡಿನ ಆಚಾರ ವಿಚಾರಗಳಿಗೆ ಆದ್ಯತೆ ನೀಡುವುದು, ಭೂತ ಕೋಲ ಕಟ್ಟುವ ಕುಟುಂಬಕ್ಕೆ ಪಿಂಚಣಿ, ಯಕ್ಷಗಾನ ಕಲಾವಿದರಿಗೆ ಪಿಂಚಣಿ, ತುಳುನಾಡಿನ ಕ್ರೀಡೆ, ಕಲೆ,ಸಂಸ್ಕೃತಿ ಪ್ರೋತ್ಸಾಹಕ್ಕೆ ವಿಶೇಷ ಕ್ರಮಗಳನ್ನು ಯೋಚಿಸಿದ್ದಾರೆ. ಕುಮ್ಕಿ ಹಕ್ಕು, 94 ಸಿ, 94 ಸಿ.ಸಿ. ಮಂಜೂರಾತಿಗೆ ಕ್ರಮ, ಭೂ ಪರಿವರ್ತನೆ ನಿಯಮ ಸಡಲೀಕರಣ, ಸುಸಜ್ಜಿತ ಈಜುಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆ ಇವರ ಪ್ರಣಾಳಿಕೆಯಲ್ಲಿದೆ.

೨೦೧೭ ಇಂಟರ್ ಕರ್ನಾಟಕ, ೨೦೧೮ರಲ್ಲಿ ಸೂಪರ್ ಸ್ಟಾರ್ ಮಿಸ್ಟರ್ ಇಂಡಿಯಾ ವಿನ್ನರ್ ಆಗಿ ಹೊರಹೊಮ್ಮಿದ ಸಂದೀಪ್ ಶೆಟ್ಟಿ ,ಡ್ಯಾನ್ಸ್ ಟು ಡ್ಯಾನ್ಸ್,ಡ್ಯಾನ್ಸ್ ಕುಡ್ಲ ಡ್ಯಾನ್ಸ್,ಕುಡ್ಲ ಗೋಟ್ ಟ್ಯಾಲೆಂಟ್ ಹೀಗೆ ಹಲವು ಶೋಗಳ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಅಕವಾಶ ನೀಡಿ, ಯುವಜನತೆಯ ಮನಗೆದ್ದವರು.
ದೂರದೃಷ್ಟೀ ಚಿಂತನೆಯ ಯುವ ಮನಸ್ಸು ಚುನಾವಣೆಯನ್ನೆದುರಿಸುತ್ತಿದೆ. ಭವಿಷ್ಯದ ಸಶಕ್ತ ಚಿಂನತೆಯ ಸಾಕಾರಕ್ಕಾಗಿ ಜನತೆಯ ಸಹಕಾರ ಬಯಸುತ್ತಿದೆ. ಕ್ಷೇತ್ರದಾದ್ಯಂತ ಬದಲಾವಣೆಯ ಗಾಳಿ ಜೋರಾಗಿದ್ದು, ಜನತೆ ಉತ್ತರಕ್ಕೆ ಸಂದೀಪ ಶೆಟ್ಟಿಯವರನ್ನು ಆಯ್ಕೆ ಮಾಡಿದರೆ ತಪ್ಪೇನಿಲ್ಲ.!