ಡೋಂಟ್‌ ಮಿಸ್!‌ ಇದನ್ನು ಕುಡೀತಾ ಇರಿ…

ಇಂದು ಸಾಂಕ್ರಾಮಿಕ ರೋಗದ್ದೇ ಭೀತಿ. ಈ ಸಾಂಕ್ರಾಮಿಕ ರೋಗಗಳಿಂದ ದೂರ ಉಳಿಯಲು ಇಲ್ಲಿದೆ ಸಿಂಪಲ್‌ಸೊಲ್ಯೂಷನ್!‌ ಹಾಗಾದ್ರೆ ಅದೇನು ನೋಡ್ಬೇಕೇ?
ಒಂದು ಲೋಟ ತುಳಸಿ-ಹಾಲು ಪೇಯ ಸಾಕು ಅಂದರೆ ನಂಬಲು ಸಾಧ್ಯವೇ? ಹೌದು. ನೀವು ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಬಯಸಿದರೆ, ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಬೇಕು. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ತುಳಸಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ತುಳಸಿ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳಿಂದ ಸಮೃದ್ಧವಾಗಿವೆ. ತುಳಸಿ ಎಲೆಗಳನ್ನು ವಿವಿಧ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ತುಳಸಿ ಮತ್ತು ಹಾಲು ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ. ತುಳಸಿ ಗಿಡಕ್ಕೆ ಆಧ್ಯಾತ್ಮಿಕ ಮಹತ್ವವಿದೆ ಜೊತೆಗೆ ಆದ್ಯತೆ ಇದೆ. ಮತ್ತೊಂದೆಡೆ, ತುಳಸಿ ಸಸ್ಯವು ಆರೋಗ್ಯಕ್ಕೆ ಅತ್ಯುತ್ತಮ ಔಷಧವಾಗಿದೆ. ತುಳಸಿ ಎಲೆಗಳನ್ನು ವಿವಿಧ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ.
ತುಳಸಿ ಮತ್ತು ಹಾಲು ಇವೆರಡನ್ನು ಒಟ್ಟಿಗೆ ಕುಡಿಯುವುದು ಸೂಪರ್ ಟಾನಿಕ್ ಆಗಿ ಕೆಲಸ ಮಾಡುತ್ತದೆ.

ಎಕ್ಸಲೆಂಟ್‌ ವಿದ್ಯಾಸಂಸ್ಥೆ ಕಲ್ಲಬೆಟ್ಟು ಮೂಡುಬಿದಿರೆ- ಪ್ರವೇಶಾರಂಭ – ಜಾಹೀರಾತು

ಈ ಸ್ವಾದಿಷ್ಟ ಪೇಯ ತಯಾರಿಸುವ ವಿಧಾನ:
4-5 ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಚೆನ್ನಾಗಿ ತೊಳೆಯಿರಿ. ಪ್ಯಾನ್ ನಲ್ಲಿ, ಒಂದು ಲೋಟ ಹಾಲು ಕಾಯಿಸಿ. ಹಾಲಿಗೆ ತುಳಸಿ ಎಲೆಗಳನ್ನು ಸೇರಿಸಿ, ಒಂದೆರಡು ನಿಮಿಷ ಸಿಮ್ ನಲ್ಲಿ ಕುದಿಸಿ. ಮಿಶ್ರಣ ತಂಪಾಗಲು ಬಿಡಿ, ನಂತರ ಲೋಟಕ್ಕೆ ಸುರಿಯಿರಿ. ಉತ್ತಮ ಫಲಿತಾಂಶಕ್ಕೆ ತುಳಸಿ ಹಾಲನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.


ಇದರ ಲಾಭಗಳು:
ಇದು ಹೃದಯ ರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ. ಶರೀರದಲ್ಲಿ ಆಕ್ಸಿಜನೇಶನ್ ಮಟ್ಟ ಹೆಚ್ಚಿಸುತ್ತದೆ.
ಶರೀರದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುವ ಅದ್ಬುತ ಡೈಯುರೇಟಿಕ್ ಆಗಿದೆ. ಇದು ಮೂತ್ರಕೋಶದಿಂದ ವಿಷಕಾರಕಗಳನ್ನು ತೆಗೆಯುವುದರಿಂದ ಕಲ್ಲುಗಳು ನಿಧಾನವಾಗಿ ಕರಗುತ್ತವೆ.
ಇದು ನಿಮ್ಮ ರೋಗನಿರೋಧಕ ಮಟ್ಟವನ್ನು ಹೆಚ್ಚಿಸಿ ಕ್ಯಾನ್ಸರ್ ಲಕ್ಷಣಗಳ ವಿರುದ್ಧ ಹೋರಾಡುತ್ತದೆ.
ಕೆಲಸದಿಂದ ಆಯಾಸವಾದಾಗ ಒಂದು ಕಪ್ ಬೆಚ್ಚಗಿನ ತುಳಸಿ ಹಾಲು ಸೇವಿಸುವುದರಿಂದ ನಿಮಗೆ ಉಪಶಮನ ದೊರೆಯುತ್ತದೆ. ಇದು ನಿಮ್ಮ ನರವ್ಯವಸ್ಥೆಗೆ ವಿಶ್ರಾಂತಿ ನೀಡಿ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೈಗ್ರೇನ್ ನಿಂದಾಗಿ ಉಂಟಾಗುವ ತಲೆನೋವನ್ನು ಶಮನಗೊಳಿಸುತ್ತದೆ. ಈ ಪೇಯ ಉಸಿರಾಟ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆಯಿದ್ದರೆ ಸರಿಪಡಿಸುತ್ತದೆ. ಪ್ರತಿದಿನ ತುಳಸಿ ಹಾಲನ್ನು ಸೇವಿಸುವುದರಿಂದ ಅಸ್ತಮಾ ರೋಗಿಗಳಿಗೆ ತುಂಬಾ ಪ್ರಯೋಜನಗಳಿವೆ.

Share

Leave a Reply

Your email address will not be published. Required fields are marked *