MOODUBIDIRI:ನಮ್ಮ ನಡೆ ಮತಗಟ್ಟೆಯ ಕಡೆ

ಮೂಡುಬಿದಿರೆ: ಮೂಡುಬಿದಿರೆ ಪುರಸಭೆ, ಮೂಡುಬಿದಿರೆ ತಾಲೂಕು ಪಂಚಾಯತ್ ಸಹಯೋಗದೊಂದಿಗೆ ವಿಧಾನಸಭಾ ಚುನಾವಣೆ-2023 ಅಂಗವಾಗಿ ಮತಗಟ್ಟೆಯ ಬಗ್ಗೆ ಅರಿವು ಮೂಡಿಸಲು “ನಮ್ಮ ನಡೆ ಮತಗಟ್ಟೆಯ ಕಡೆ” ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ದ್ವಿಚಕ್ರ ವಾಹನ‌ ರಾಲಿ ಕಾರ್ಯಕ್ರಮವು ಮೂಡುಬಿದಿರೆ ಆಡಳಿತ ಸೌಧ ಕಚೇರಿ ಮುಂಭಾಗದಿಂದ ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದ ವರೆಗೆ ನಡೆಯಿತು. ಮತದಾನ ಜಾಗೃತಿ ರಥವನ್ನು ಚುನಾವಣಾಧಿಕಾರಿ ಸಚ್ಚಿದಾನಂದ ಎಸ್. ಕುಚನೂರ ಅವರು ಬಾವುಟ ಹಾರಿಸುವುದರ ಮೂಲಕ ಚಾಲನೆ‌ ನೀಡಿದರು.

ಎಕ್ಸಲೆಂಟ್‌ ವಿದ್ಯಾಸಂಸ್ಥೆ ಕಲ್ಲಬೆಟ್ಟು ಮೂಡುಬಿದಿರೆ- ಪ್ರವೇಶಾರಂಭ – ಜಾಹೀರಾತು

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಯಕ್ಷಗಾನ ಕಲಾವಿದರು ಮತದಾನ ಜಾಗೃತಿ ಮೂಡಿಸುವ ಕಿರು ಪ್ರಹಸನದ‌ ಮೂಲಕ ಗಮನ‌ ಸೆಳೆದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದಯಾವತಿ ಎಂ., ಪುರಸಭೆ ಮುಖ್ಯಾಧಿಕಾರಿ ಶಿವಾ ನಾಯ್ಕ್ , ತಾ.ಪಂ ಸಹಾಯಕ‌ನಿರ್ದೇಶಕರು ರಮೇಶ್ ರಾಥೋಡ್ ಪ್ರಭಾರ(ಗ್ರಾ.ಉ), ಪುರಸಭೆ ಪರಿಸರ ಅಭಿಯಂತರರು ಶಿಲ್ಪಾ ತಾ.ಪಂ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಎಂಬಿಕೆ, ಎಲ್ ಸಿ ಆರ್ ಪಿಗಳು, ಪುರಸಭೆ ಪೌರಕಾರ್ಮಿಕರು ಉಪಸ್ಥಿತರಿದ್ದರು.‌ದ್ವಿಚಕ್ರ ವಾಹನಗಳಿಗೆ ನಮ್ಮ‌ನಡೆ ಮತದಾನದ ಕಡೆ ಎಂಬ ಸ್ಟಿಕರ್ ಅಂಟಿಸಿ ರ್ಯಾಲಿ ನಡೆಯಿತು.

ಜಾಗೃತಿ ಜಾಥಾಕ್ಕೆ ಚಾಲನೆ
Share

Leave a Reply

Your email address will not be published. Required fields are marked *