ಭಾವಗೀತೆಗಳಿಂದ ಮನಸ್ಸು, ಬುದ್ಧಿಗೆ ಸತ್‌ಪ್ರೇರಣೆ
ಮೂಡುಬಿದಿರೆ : ನಾದದಿಂದಲೇ ಜಗತ್ತಿನ ಹುಟ್ಟು ಆಗಿದೆ. ನಾದದ ಎಳೆಗಳಿರುವ ಒಳ್ಳೆಯ ಭಾವಗೀತೆಗಳು ನಮ್ಮ ಮನಸ್ಸನ್ನು ಉತ್ತಮವಾಗಿಸುತ್ತದೆ. ಬುದ್ಧಿಗೆ ಸತ್‌ಪ್ರೇರಣೆ ನೀಡುತ್ತವೆ ಎಂದು ರೋಟರಿ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಎ.ಕೆ. ರಾವ್ ಹೇಳಿದರು.
ರೋಟರಿ ಸಮ್ಮಿಲನ್ ಹಾಲ್‌ನಲ್ಲಿ ನಡೆದ, ರೋಟರಿ ಆ.ಮಾ. ಶಾಲೆಯ ಸಹಶಿಕ್ಷಕ ಮೋಹನ್ ಹೊಸ್ಮಾರ್ ಅವರ `ಮನವೆಂಬ ಮಂಟಪ’ `ಭಾವಗೀತೆ ವಿಡಿಯೋ ಚಿತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ರೋಟರಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ್ ಪಿ.ಎಂ. ಅಧ್ಯಕ್ಷತೆ ವಹಿಸಿ, ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ವ್ಯಕ್ತವಾಗುತ್ತಿರುವ ರೋಟರಿ ಶಾಲೆಯ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ರಾಷ್ಟ್ರೀಯಮಟ್ಟದ ಸಾಧನೆಯ ಮಾಡಲು ಪ್ರೇರಣೆಯಾಗಿರುವುದೇ ಮೋಹನ್ ಹೊಸ್ಮಾರ್ ಅವರಿಂದ. ಅವರ ತರಬೇತಿ, ಪರಿಶ್ರಮ ಪ್ರಶಂಸನೀಯ ಎಂದರು.
ಶಾಲಾ ಸಂಚಾಲಕ ಪ್ರವೀಣ್ ಚಂದ್ರ ಜೈನ್, ಪತ್ರಕರ್ತ ಹರೀಶ್ ಕೆ. ಆದೂರು, ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ್ ಜೈನ್ ಪಾಲ್ಗೊಂಡಿದ್ದರು.
ಗೌರವ : ಹಿರಿಯ ಶಿಕ್ಷಕ ಗಜಾನನ ಮರಾಠೆ (ರಾಗ ಸಂಯೋಜನೆ, ಸಂಗೀತ), ಶ್ವೇತಾ ಹೆಬ್ಬಾರ್(ಗಾಯನ), ಸಂತೋಷ್ ಪುಚ್ಚೇರ್ (ಧ್ವನಿಮುದ್ರಣ,ಸಂಕಲನ, ಪ್ರಚಾರ) , ಎ.ಕೆ.ವಿಜಯ್ ಕೋಕಿಲಾ (ಸಂಗೀತ ನಿರ್ದೇಶಕ) ಇವರನ್ನು ಗೌರವಿಸಲಾಯಿತು.

ತಿಲಕಾ ಅನಂತವೀರ ಜೈನ್ ಸ್ವಾಗತಿಸಿ, ಕವಿ ಮೋಹನ್ ಹೊಸ್ಮಾರ್ ವಂದಿಸಿದರು. ನಿತೇಶ್ ಕುಮಾರ್ ನಿರೂಪಿಸಿದರು.