IPL 2023 ಹಸಿರು ಜೆರ್ಸಿಯಲ್ಲಿ ಆರ್ ಸಿಬಿ ಸಾಧನೆ ಹೇಗಿದೆ? ಗೆಲುವಿಗಿಂತ ಸೋಲು ಜಾಸ್ತಿ

ಬೆಂಗಳೂರು: ಪಂಜಾಬ್ ಕಿಂಗ್ಸ್ ವಿರುದ್ಧ ಹುಮ್ಮಸ್ಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹುಡುಗರು ಇಂದು ರಾಯಲ್ ಕದನಕ್ಕೆ ರೆಡಿಯಾಗಿದ್ದಾರೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿಬಿ ಆಡಲಿದೆ. ವಿಶೇಷವೆಂದರೆ ಇಂದಿನ ಪಂದ್ಯದಲ್ಲಿ ಆರ್ ಸಿಬಿ ಹಸಿರು ಬಣ್ಣದ ಜೆರ್ಸಿಯಲ್ಲಿ ಆಡಲಿದೆ.

2011 ಆರ್ ಸಿಬಿ ಗ್ರೀನ್ ಜೆರ್ಸಿಯಲ್ಲಿ ಒಂದು ಪಂದ್ಯ ಆಡುತ್ತಿದೆ. 2021ರಲ್ಲಿ ಕೋವಿಡ್ ಸೇನಾನಿಗಳಿಗಗಿ ನೀಲಿ ಬಣ್ಣದ ಜೆರ್ಸಿಯಲ್ಲಿ ಆಡಿತ್ತು. ಕೋವಿಡ್ ಕಾರಣದಿಂದ 2019ರ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗ್ರೀನ್ ಜೆರ್ಸಿಯಲ್ಲಿ ಆಡುತ್ತಿದೆ.

‘ಗೋ ಗ್ರೀನ್’ ಅಭಿಯಾನವು ಮರಗಳನ್ನು ನೆಡುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜಾಗತಿಕ ತಾಪಮಾನದ ಪರಿಣಾಮವನ್ನು ಕಡಿಮೆ ಮಾಡಲು ರೂಪಿಸಲಾಗಿದೆ. ಇದರ ಭಾಗವಾಗಿ ಟಾಸ್ ಸಮಯದಲ್ಲಿ ಆರ್‌ಸಿಬಿಯ ನಾಯಕ ಎದುರಾಳಿ ನಾಯಕನಿಗೆ ಸ್ಮರಣಿಕೆಯಾಗಿ ಒಂದು ಸಸ್ಯವನ್ನು ಕೊಡುತ್ತಾರೆ.

ಬೆಂಗಳೂರು ಫ್ರಾಂಚೈಸಿಯು 100 ಪ್ರತಿಶತ ಮರುಬಳಕೆಯ ವಸ್ತುಗಳಿಂದ ಮಾಡಿದ ಹಸಿರು ಜೆರ್ಸಿಗಳನ್ನು ಮಧ್ಯಾಹ್ನದ ಪಂದ್ಯಗಳಲ್ಲಿ ಮಾತ್ರ ಧರಿಸುತ್ತದೆ. ಆದ್ದರಿಂದ ಇಂದು ಮಧ್ಯಾಹ್ನ 3:30 ಕ್ಕೆ ನಡೆಯುವ ರಾಯಲ್ಸ್ ವಿರುದ್ಧದ ಪಂದ್ಯವನ್ನು ‘ಗೋ ಗ್ರೀನ್’ ದಿನವನ್ನಾಗಿ ಆಯ್ಕೆ ಮಾಡಲಾಗಿದೆ.

ಆರ್ ಸಿಬಿ ಸಾಧನೆ

ಇಲ್ಲಿಯವರೆಗೆ, ಆರ್ ಸಿಬಿ ಗ್ರೀನ್ ಜರ್ಸಿಯಲ್ಲಿ ಒಟ್ಟು 12 ಪಂದ್ಯಗಳನ್ನು ಆಡಿದೆ, ಆದರೆ ಗೆದ್ದಿರುವುದು ಕೇವಲ ಮೂರು ಮಾತ್ರ. 2015 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಳೆಯಿಂದಾಗಿ ಒಂದು ಪಂದ್ಯವನ್ನು ರದ್ದಾಗಿತ್ತು.

2011 ರ ಋತುವಿನಲ್ಲಿ ಮೊದಲ ಹಸಿರು ಜೆರ್ಸಿಯನ್ನು ಕೊಚ್ಚಿ ಟಸ್ಕರ್ಸ್ ಕೇರಳದ ವಿರುದ್ಧ ಆಡಿ 9 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.

ಅವರ ಎರಡನೇ ಗೆಲುವು 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಬಂದಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಇಬ್ಬರೂ ಶತಕ ಬಾರಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ಅನ್ನು 67 ರನ್‌ಗಳಿಂದ ಸೋಲಿಸಿದ ಆರ್ ಸಿಬಿ ಹಸಿರು ಜೆರ್ಸಿಯ ಮೂರನೇ ಗೆಲುವು ಪಡೆದಿತ್ತು. ಈ ಪಂದ್ಯ ಕಳೆದ ವರ್ಷ ವಾಂಖೆಡೆಯಲ್ಲಿ ನಡೆದಿತ್ತು.

Share

Leave a Reply

Your email address will not be published. Required fields are marked *