ಫಿಫಾ ವಿಶ್ವಕಪ್‌ನಲ್ಲಿ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎನ್ನುವ ಭವಿಷ್ಯಗಳನ್ನು ಆಕ್ಟೋಪಸ್ ಹಾಗೂ ಹಂದಿ ಭವಿಷ್ಯ ನುಡಿದಿದ್ದನ್ನು ನಾವು ಕೇಳಿದ್ದೇವೆ. ಅದಂತೆ ಕರ್ನಾಟಕದ ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಶ್ವಾನವೊಂದು ಭವಿಷ್ಯ ನುಡಿದಿದೆ.
ಕರ್ನಾಟಕ ಮುಂದಿನ ಮುಖ್ಯಮಂತ್ರಿ ಯಾರು? ಭವಿಷ್ಯ ನುಡಿದ ಕಾಲ ಭೈರವನ ಪ್ರತಿ ರೂಪ ಶ್ವಾನಹೆಚ್ಡಿ ಕುಮಾರಸ್ವಾಮಿ ಹಿಡಿದು ತಂದ ಶ್ವಾನ
ಮಂಡ್ಯ: ಕರ್ನಾಟಕ ವಿಧಾನಸಭೆ ಚುನಾವಣೆಗೆ( Karnataka Assembly Elections 2023) ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆಗಳು ಮುಗಿದಿದ್ದು, ಇದೀಗ ಕ್ಷೇತ್ರಗಳಲ್ಲಿ ರಾಜಕಾರಣ ರಂಗೇರಿದೆ. ನಾಯಕರ ಮತಶಿಕಾರಿ ಜೋರಾಗಿದೆ. ಹೂವಿನ ಮಳೆ ಸುರಿಸೋದೇನು.. ಪಟಾಕಿ ಹೊಡೆಯೋದೇನು.. ರಾಜಕೀಯ ನಾಯಕಂತೂ ನಾನಾ ಅಸ್ತ್ರಗಳ ಮೂಲಕ ಮತ ದಾಳ ಎಸೆಯುತ್ತಿದ್ದಾರೆ. ಇದರ ಮಧ್ಯೆ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ಹಾಗೇ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಯಾರು ಈ ಸಲ ಮುಖ್ಯಮಂತ್ರಿಯಾಗುತ್ತಾರೆ ಅಂತೆಲ್ಲ ಚರ್ಚೆಗಳು ಜೋರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಲ್ಗಳು ಸಹ ಹರಿದಾಡುತ್ತಿವೆ. ಇದರ ನಡುವೆ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಲ ಭೈರವನ ಪ್ರತಿ ರೂಪ ಶ್ವಾನ ಭವಿಷ್ಯ ನುಡಿದಿದೆ.
ಇದನ್ನೂ ಓದಿ: CT Ravi: ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಎಂದ ಸಿ.ಟಿ.ರವಿ
ಫಿಫಾ ವಿಶ್ವಕಪ್‌ನಲ್ಲಿ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎನ್ನುವ ಭವಿಷ್ಯಗಳನ್ನು ಆಕ್ಟೋಪಸ್ ಹಾಗೂ ಹಂದಿ ಭವಿಷ್ಯ ನುಡಿದಿದ್ದನ್ನು ನಾವು ಕೇಳಿದ್ದೇವೆ. ಅದಂತೆ ಕರ್ನಾಟಕದ ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಶ್ವಾನವೊಂದು ಭವಿಷ್ಯ ನುಡಿದಿದೆ. ಹೌದು….ಮಂಡ್ಯ ಜಿಲ್ಲೆ ಮಂಡ್ಯ ನಗರದ ಅಶೋಕನಗರದ ಗೋಪಿ ಎನ್ನುವರ ಭೈರವ ಹೆಸರಿನ ಶ್ವಾನವು ಹೆಚ್.ಡಿ ಕುಮಾರಸ್ವಾಮಿಯವರ ಭಾವ ಚಿತ್ರ ಸೂಚಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ಎನ್ನುವ ಸುಳಿವು ನೀಡಿದೆ.
ಗೋಪಿ ಅವರು ಕಾಲಭೈರವನ ಭಕ್ತರು. ಪ್ರತಿ ಸೋಮವಾರವೂ ಸಹ ಇವರ ಕುಟುಂಬ ಕಾಲಭೈರವನ ಪೂಜೆ ಮಾಡಿಕೊಂಡು ಬಂದಿದೆ. ಅಲ್ಲದೇ ದೇವಸ್ಥಾನಕ್ಕೆ ತಮ್ಮ ಶ್ವಾನವನ್ನೂ ಸಹ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅದರಂತೆ ತಮ್ಮ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಬಸವರಾಜ ಬೊಮ್ಮಾಯಿ, ಹೆಚ್ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರ ಮೂರು ಫೋಟೋಗಳನ್ನು ಇಟ್ಟು ಅಪ್ಪಣೆ ಕೇಳಿದ್ದಾರೆ. ಈ ವೇಳೆ ಶ್ವಾನ ಹೆಚ್ಡಿ ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿ ತೋರಿಸಿದೆ. ಈ ಮೂಲಕ ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎನ್ನುವ ಭವಿಷ್ಯ ನುಡಿದೆ.
ಈ ಹಿಂದೆ ಸಹ ಈ ಶ್ವಾನದಂತೆ ಹಲವು ಪವಾಡಗಳು ನಡೆದಿವೆಯಂತೆ. ಪುನಿತ್ ರಾಜ್ ಕುಮಾರ್ ಸಾಯುವುದಕ್ಕೂ ಮುನ್ನ ಪ್ರತಿ ದಿನ ಅವರ ಫೋಟೋ ಹಿಡಿದುಕೊಳ್ಳುತ್ತಿತ್ತಂತೆ. ಹೀಗೆ ಗೋಪಿ ಅವರ ಶ್ವಾನ ನೀಡುತ್ತಿರುವ ಸೂಚನೆಗಳು ನಿಜವಾಗುತ್ತಿವೆ ಎನ್ನಲಾಗಿದೆ. ಇದೀಗ ಕುಮಾರಸ್ವಾಮಿ ಫೋಟೋವನ್ನು ಎತ್ತಿ ಹಿಡಿಯುವ ಮೂಲಕ ಮುಂದಿನ ಸಿಎಂ ಎನ್ನುವ ಸೂಚನೆಯನ್ನು ನೀಡಿದೆ.
ಶ್ವಾನದ ಪವಾಡದ ಬಗ್ಗೆ ಮಾಲೀಕ ಗೋಪಿ ಮಾತುಗಳು
ಇನ್ನು ಈ ಶ್ವಾನ ಬಳಿ ಶಕ್ತಿ ಇದೆ. ಇರಿಂದ ಹಲವು ಪವಾಡಗಳು ನಡೆದಿವೆ ಎನ್ನುವುದನ್ನು ಮಾಲೀಕ ಗೋಪಿ ಹೇಳಿದ್ದು, ಕೆಲ ತಿಂಗಳಗಳ ಹಿಂದೆ ನಮ್ಮ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ವೈದ್ಯರು ತಾಯಿ ಜೀವದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಇತ್ತ ಮನೆಯಲ್ಲಿ ಶ್ವಾನ ಊಟ ಮಾಡದೇ ನನ್ನ ತಾಯಿಯನ್ನು ನೋಡಲು ಚಡಪಡಿಸುತ್ತಿದ್ದ, ಕೊನೆ ಒಂದು ದಿನ ಕಾರಲ್ಲಿ ಜಯದೇವ ಅಸ್ಪತ್ರೆ ಬಳಿ ಕರೆದುಕೊಂಡು ಹೋಗಿದ್ದೆ. ಆಸ್ಪತ್ರೆಗೆ ಶ್ವಾನಗಳ ಪ್ರವೇಶ ಇಲ್ಲದಿದ್ದರಿಂದ ನನ್ನ ತಾಯಿಯನ್ನು ವೀಲ್ ಚೇರ್ ಮೂಲಕ ಆಸ್ಪತ್ರೆಯಿಂದ ಆಚೆ ಕರೆದುಕೊಂಡು ಬಂದಿದ್ದೆ. ಆಗ ಶ್ವಾನ ನನ್ನಮ್ಮನನ್ನು ಎರಡ್ಮೂರ ಸಲ ನೆಕ್ಕಿ ಮುದ್ದಾಡಿತ್ತು. ಇದಾದ ಬಳಿಕ ನಮ್ಮ ತಾಯಿ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ವೈದ್ಯರು ಸಹ ಆರೋಗ್ಯದಲ್ಲಿ ಶೇ. 65 ಪರ್ಸೆಂಟ್ ಸುಧಾರಿಸಿದೆ ಎಂದು ಹೇಳಿದ್ದಾರೆ ಎಂದು ಗೋಪಿ ತಮ್ಮ ಶ್ವಾನದ ಪವಾಡದ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಇನ್ನು ಪತ್ರನಿಗೂ ಅನಾರೋಗ್ಯವಾದಾಗಲೂ ಶ್ವಾನದ ಪವಾಡದಿಂದ ಆರೋಗ್ಯವಾಗಿದ್ದಾನೆ. ಈ ಎಲ್ಲಾ ಅನಿರೀಕ್ಷಿತ ಬೆಳವಣಿಗೆಗಳಿಂದ ಈ ಶ್ವಾನದಲ್ಲಿ ಏನೋ ಶಕ್ತಿ ಇದೆ ಎಂದು ಅನ್ಸಿಸಿತು. ನಾವು ಮನೆಯಲ್ಲಿ ಪೂಜೆ ಮಾಡುವಾಗ ದೇವರ ಮನೆಗೆ ಬಂದು ಎರಡೂ ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳುತ್ತೆ ಎಂದರು.
ಕಳೆದ ಎರಡು ವರ್ಷಗಳಿಂದ ಶ್ವಾನ ನುಡಿದ ಭವಿಷ್ಯ ನಿಜವಾಗುತ್ತಿದೆಯಂತೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶ್ವಾನದ ಭವಿಷ್ಯ ನಿಜವಾಗಲಿದೆಯೇ ಕಾದು ನೋಡಬೇಕು.