Astro Tips: ನಿಮ್ಮ ಜಾತಕದಲ್ಲಿ ವಂಚನೆ, ಕಳ್ಳತನಕ್ಕೆ ಗುರಿಯಾಗುವ ಭೀತಿ ಇದೆಯೇ?

Astro Tips: ನಿಮ್ಮ ಜಾತಕದಲ್ಲಿ ವಂಚನೆ, ಕಳ್ಳತನಕ್ಕೆ ಗುರಿಯಾಗುವ ಭೀತಿ ಇದೆಯೇ? ಹಾಗಾದರೆ ಜಾತಕದ ಪ್ರಕಾರ ಅದನ್ನು ತಡೆಗಟ್ಟುವ ಕ್ರಮಗಳೇನು?
TV9 Digital Desk | Edited By: ಸಾಧು ಶ್ರೀನಾಥ್​ Updated on: Apr 25, 2023 | 1:08 PM
ಬೀಗ, ಕಲ್ಲು, ರಾವಣ, ಸಾವು, ಮುಳುಗುವುದು, ಎಸೆಯುಯುವುದು, ಹೋಗು ಎನ್ನುವುದು, ನಿಂದನೆ ಮಾಡುವುದು, ದುರ್ಭಾಷೆ ಆಡುವುದು, ಚಪ್ಪಲಿ ಅನ್ನುವುದು… ಇವೇ ಮುಂತಾದ ನಕಾರಾತ್ಮಕ ಪದಗಳನ್ನು ಹೇಳುತ್ತಾ ಮನೆಯಿಂದ ಹೊರಗೆ ಹೋಗಬೇಡಿ.
Astro Tips: ನಿಮ್ಮ ಜಾತಕದಲ್ಲಿ ವಂಚನೆ, ಕಳ್ಳತನಕ್ಕೆ ಗುರಿಯಾಗುವ ಭೀತಿ ಇದೆಯೇ? ಹಾಗಾದರೆ ಜಾತಕದ ಪ್ರಕಾರ ಅದನ್ನು ತಡೆಗಟ್ಟುವ ಕ್ರಮಗಳೇನು?ನಿಮ್ಮ ಜಾತಕದಲ್ಲಿ ವಂಚನೆ, ಕಳ್ಳತನಕ್ಕೆ ಗುರಿಯಾಗುವ ಭೀತಿ ಇದೆಯೇ?
ರಾಶಿಚಕ್ರದ ಚಿಹ್ನೆಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಜಾತಕದಲ್ಲಿ (astrology) ಹಲವು ರೀತಿಯ ಯೋಗಗಳು ಇರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂತಹ ಯೋಗಗಳಲ್ಲಿ 300 ವಿಧಗಳಿವೆ. ಇವು ವ್ಯಕ್ತಿಯ ಭವಿಷ್ಯವನ್ನು ನಿರ್ದೇಶಿಸುತ್ತವೆ ಎಂಬುದು ನಂಬಿಕೆ. ಈ ಯೋಗಗಳಲ್ಲಿ (Astro Tips) ವಂಚನೆಗೊಳಗಾಗುವ ಭೀತಿ, ಕಳ್ಳತನಕ್ಕೆ (fraud, theft Phobia) ಗುರಿಯಾಗುವ ಭೀತಿ ಯೋಗವೂ ಒಂದು.

ವಂಚನೆ, ಕಳ್ಳತನ ಭೀತಿ ಯೋಗ ಒಂದು ದುಷ್ಟ ಯೋಗ. ಯಾರ ಜಾತಕದಲ್ಲಿ ಈ ಯೋಗ ಇರುತ್ತದೋ ಆ ವ್ಯಕ್ತಿ ಯಾವಾಗಲೂ ಭಯಪಡುತ್ತಾನೆ. ನಮ್ಮ ಯಾವುದೇ ವಸ್ತು ಕಳೆದುಹೋಗುತ್ತದೆ ಅಥವಾ ಕಳ್ಳತನವಾಗುತ್ತದೆ ಎಂಬ ಭಯ ಅವರ ಮನಸ್ಸಿನಲ್ಲಿ ಯಾವಾಗಲೂ ಜಾಗೃತವಾಗಿರುತ್ತದೆ. ಏನೇ ಮಾಡಿದರೂ ಮನಸ್ಸಿನಲ್ಲಿ ಆತಂಕ ಕಾಡುವುದು ಮನುಷ್ಯ ಸಹಜ ಗುಣ. ಆದರೆ ಶುಭ ಕಾರ್ಯಗಳಿಗೆ ಮನೆಯಿಂದ ಹೊರಗೆ ಹೋಗುವಾಗ ಭಯ ಪಡುವುದು ಸರಿಯಲ್ಲ. ಮನೆಯಿಂದ ಹೊರಡುವಾಗ ಯಾರಾದರೂ ಗೊಂದಲಕ್ಕೊಳಗಾದರೆ.. ಖಂಡಿತ ಈ ಕ್ರಮಗಳನ್ನು ಮಾಡಿ. ಈ ಕಾರ್ಯಗಳನ್ನು ಮಾಡುವುದರಿಂದ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ನೀವು ಕೆಲವು ವಿಶೇಷ ಮತ್ತು ಅಗತ್ಯ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ.. ಮನೆಯಿಂದ ಹೊರಡುವ ಮೊದಲು ಪರಮಾತ್ಮನನ್ನು ಭಕ್ತಿಯಿಂದ ಆರಾಧಿಸಿ. ಪೂಜೆ ಮಾಡುವಾಗ ದೀಪವನ್ನು ಹಚ್ಚಿ. ಅದೇ ಸಮಯದಲ್ಲಿ ಸುರಕ್ಷಿತ ಪ್ರಯಾಣದಲ್ಲಿ ಕೆಲಸ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ದುಷ್ಟ ಶಕ್ತಿಗಳು ದೂರವಾಗುತ್ತವೆ.

ಇದನ್ನೂ ಓದಿ:

Black Thread: ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ ಏನಾಗುತ್ತೆ ಗೊತ್ತಾ? ಯಾವ ಕಾಲಿಗೆ ಕಟ್ಟಿದರೆ ಒಳ್ಳೆಯದು?
ಕೆಲಸದಲ್ಲಿ ಯಶಸ್ಸು ಸಾಧಿಸಲು ಮನೆಯಿಂದ ಹೊರಡುವಾಗ ಕಪ್ಪು ಇರುವೆಗಳಿಗೆ ಸಕ್ಕರೆ ಅಥವಾ ಹಿಟ್ಟು ಹಾಕಿ. ಅಷ್ಟೇ ಅಲ್ಲ, ಪಕ್ಷಿಗಳಿಗೆ ಧಾನ್ಯ, ನಾಯಿಗಳಿಗೆ ಆಹಾರ ಮತ್ತು ಹಸುಗಳಿಗೆ ಆಹಾರವನ್ನು ನೀಡುವುದು ಸಹ ಒಳ್ಳೆಯದು. ಅದೇ ಸಮಯದಲ್ಲಿ ದಾರಿಯಲ್ಲಿ ಕಾಣುವ ಯಾವುದೇ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಹುಂಡಿಯಲ್ಲಿ ಕಾಣಿಕೆಯಾಗಿ ಹಣ ಹಾಕಿ. ಹೀಗೆ ಮಾಡುವುದರಿಂದ ಕೈಗೊಂಡ ಕೆಲಸದಲ್ಲಿ ಯಶಸ್ಸು ಸಿಗುವುದು ಖಚಿತ.

ಜ್ಯೋತಿಷಿಗಳ ಪ್ರಕಾರ ಪಂಚಾಂಗದಲ್ಲಿ ಶುಭ ಮುಹೂರ್ತದ ಸಮಯ ನೋಡಿ ಮನೆಯಿಂದ ಹೊರಗೆ ಹೋಗುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಕೈಗೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಇದರೊಂದಿಗೆ ಪ್ರಯಾಣವೂ ಸುರಕ್ಷಿತವಾಗಿರುತ್ತದೆ.

ಏನು ಮಾಡಬಾರದು… ಮನೆಯಿಂದ ಹೊರಗೆ ಹೋಗುವಾಗ ಆಕಸ್ಮಿಕವಾಗಿಯೂ ಬೆಂಕಿ, ಗಾಳಿ, ನೀರು ಅಂದರೆ ನದಿಯನ್ನು ಅವಮಾನಿಸಬೇಡಿ. ಇವುಗಳನ್ನು ಮನುಷ್ಯನಿಗೆ ದೇವರು ನೀಡಿದ ಕೊಡುಗೆ ಎಂದು ಪರಿಗಣಿಸಲಾಗಿದೆ. ಪಂಚಭೂತಗಳನ್ನು ನಿಂದಿಸಿದರೆ ದೇವರು ಕೋಪಗೊಳ್ಳುತ್ತಾನೆ ಎಂಬ ನಂಬಿಕೆ ಇದೆ.

ಬೀಗ, ಕಲ್ಲು, ರಾವಣ, ಸಾವು, ಮುಳುಗುವುದು, ಎಸೆಯುಯುವುದು, ಹೋಗು ಎನ್ನುವುದು, ನಿಂದನೆ ಮಾಡುವುದು, ದುರ್ಭಾಷೆ ಆಡುವುದು, ಚಪ್ಪಲಿ ಅನ್ನುವುದು… ಇವೇ ಮುಂತಾದ ನಕಾರಾತ್ಮಕ ಪದಗಳನ್ನು ಹೇಳುತ್ತಾ ಮನೆಯಿಂದ ಹೊರಗೆ ಹೋಗಬೇಡಿ.

Share

Leave a Reply

Your email address will not be published. Required fields are marked *