ಮಣ್ಣಿನ ಮಡಕೆ ಅಥವಾ ಮಟ್ಕಾ

ಬೇಸಿಗೆಯಲ್ಲಿ ಮಡಿಕೆಯಲ್ಲಿಟ್ಟ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಾ?
ಪ್ರೀತಿ ಭಟ್​, ಗುಣವಂತೆ | Edited By: Akshatha Vorkady Updated on:Apr 25, 2023 | 2:37 PM
ಮಣ್ಣಿನ ಮಡಕೆ ಅಥವಾ ಮಟ್ಕಾ ಬೇಸಿಗೆಯಲ್ಲಿ ಬಹಳ ಉಪಯುಕ್ತವಾಗಿದೆ. ಇದು ನೈಸರ್ಗಿಕವಾಗಿ ನೀರನ್ನು ತಂಪಾಗಿರಿಸುವುದು ಮಾತ್ರವಲ್ಲದೆ, ಜೀರ್ಣಕ್ರಿಯೆಗೆ ಸಹಾಯ ಮಾಡುದರಿಂದ ಹಿಡಿದು ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಬೇಸಿಗೆಯಲ್ಲಿ ಮಡಿಕೆಯಲ್ಲಿಟ್ಟ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಾ?ಮಡಿಕೆಯಲ್ಲಿಟ್ಟ ನೀರಿನ ಪ್ರಯೋಜನಗಳು
Image Credit Source: Stylecraze
ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ಪ್ರಕರವಾಗಿದೆ. ನಿರಂತರ ಬಾಯಾರಿಕೆ ತಣಿಸಲು ತಣ್ಣೀರು ಕುಡಿಯುವ ಹಂಬಲವೂ ಇದೆ. ಆರೋಗ್ಯ ತಜ್ಞರ ಪ್ರಕಾರ, ನಿರ್ಜಲೀಕರಣವನ್ನು ತಡೆಗಟ್ಟಲು ಸುಡುವ ಶಾಖದ ಸಮಯದಲ್ಲಿ ಹೈಡ್ರೇಟ್ ಮಾಡುವುದು ಹೆಚ್ಚು ಮುಖ್ಯ, ಇದನ್ನು ನಿರ್ಲಕ್ಷಿಸಬಾರದು. ಆದ್ದರಿಂದ, ರೆಫ್ರಿಜರೇಟರ್ ಅನ್ನು ಆಗಾಗ್ಗೆ ತೆರೆಯುವುದು, ಪ್ರತಿದಿನ ಬಾಟಲಿಗಳನ್ನು ತುಂಬುವುದು ಈ ಎಲ್ಲ ಕೆಲಸಕ್ಕಿಂತ, ವಿಭಿನ್ನವಾದದ್ದನ್ನು ಪ್ರಯತ್ನಿಸಿ. ಮಣ್ಣಿನ ಮಡಕೆ ಅಥವಾ ಮಟ್ಕಾವನ್ನು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕುಡಿಯುವ ನೀರನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಇಲ್ಲಿಯವರೆಗೆ, ಅನೇಕ ಕುಟುಂಬಗಳು ಇದನ್ನು ಪ್ರಧಾನವಾಗಿ ಬಳಸುತ್ತಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚು ಬಳಸುತ್ತಾರೆ. ನಾವು ಎಷ್ಟೇ ತಂಪು ನೀರು ಕುಡಿಯುತ್ತೇವೆ ಎಂದರು ನಮಗೆ ಬೇಸಿಗೆಯ ಶಾಖಕ್ಕೆ ಬಿಸಿನೀರನ್ನೇ ಕುಡಿದ ಹಾಗಾಗುತ್ತದೆ. ಹಾಗಾಗಿ ಮಡಿಕೆಯ ನೀರಷ್ಟು ತಂಪು ಯಾವುದು ಇಲ್ಲ. ಅದಲ್ಲದೆ ಮಟ್ಕಾದಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ಮಣ್ಣಿನ ಮಡಕೆಯಿಂದ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?
ಸ್ಟೀಲ್ ಮತ್ತು ಪ್ಲಾಸ್ಟಿಕ್ ಮತ್ತು ಗಾಜಿನ ಪಾತ್ರೆಗಳು ಅಥವಾ ಬಾಟಲಿಗಳಿಗೆ ಬದಲಿಯಾಗಿ ಕಾರ್ಯನಿರ್ವಹಿಸುವುದರ ಹೊರತಾಗಿ, ಮಟ್ಕಾ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಖನಿಜಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅಲ್ಲದೆ, ಹೆಚ್ಚಿನ ತಾಪಮಾನದಲ್ಲಿ, ನೀವು ರೆಫ್ರಿಜರೇಟರ್ನಿಂದ ನೇರವಾಗಿ ನೀರನ್ನು ಕುಡಿದಾಗ, ದೇಹಕ್ಕೆ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ನಂಬುತ್ತಾರೆ. ಅದಕ್ಕಾಗಿಯೇ ಮಣ್ಣಿನ ಮಡಕೆಗಳಿಂದ ನೀರನ್ನು ಕುಡಿಯಲು ಸೂಚಿಸುತ್ತಾರೆ. ಏಕೆಂದರೆ ಅವು ನೀರನ್ನು ನೈಸರ್ಗಿಕ ತಂಪಾಗಿಸುವ ಗುಣವನ್ನು ಹೊಂದಿವೆ.

ಇತರ ಕೆಲವು ಪ್ರಯೋಜನಗಳು ಹೀಗಿವೆ:
ನೀರಿನ ಕ್ಷಾರೀಯತೆಯನ್ನು ಹೆಚ್ಚಿಸುತ್ತದೆ:
ರೋಗಗಳು ಮತ್ತು ಸೋಂಕುಗಳು ಆಮ್ಲೀಯ ವಾತಾವರಣದಲ್ಲಿ ಬೆಳೆಯುತ್ತವೆ ಮತ್ತು ನಾವು ತಿನ್ನುವ ಹೆಚ್ಚಿನ ಆಹಾರವು ಆಮ್ಲೀಯವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಜೇಡಿಮಣ್ಣು ನೈಸರ್ಗಿಕವಾಗಿ ಕ್ಷಾರೀಯವಾಗಿರುವುದರಿಂದ, ಅದರಲ್ಲಿ ಸಂಗ್ರಹಿಸಿದ ನೀರು ಸೂಕ್ತವಾದ pH ಸಮತೋಲನವನ್ನು ಕಾಪಾಡುತ್ತದೆ ಮತ್ತು ಕುಡಿಯುವುದರಿಂದ ಕ್ಷಾರೀಯ ಗುಣಲಕ್ಷಣಗಳನ್ನು ಒದಗಿಸುತ್ತದೆ.

Share

Leave a Reply

Your email address will not be published. Required fields are marked *