IPL 2023

Virat Kohli: ಆರ್​​ಸಿಬಿ ಕ್ಯಾಪ್ಟನ್ ಕೊಹ್ಲಿಗೆ ಬರೋಬ್ಬರಿ ₹24 ಲಕ್ಷ ದಂಡ; ಐಪಿಎಲ್ 2023ರಲ್ಲಿ ಭಾರೀ ಮೊತ್ತ ತೆತ್ತ ವಿರಾಟ್​​!
ಐಪಿಎಲ್​ 2023ನೇ ಆವೃತ್ತಿಯಲ್ಲಿ ಆರ್​​ಸಿಬಿ ತಂಡ ಎರಡನೇ ಬಾರಿಗೆ ಸ್ಲೋ ಓವರ್​ ರೇಟ್​​ ಹೊಂದಿದ್ದ ಕಾರಣಕ್ಕೆ ತಂಡದ ನಾಯಕರಾಗಿದ್ದ ವಿರಾಟ್​ ಕೊಹ್ಲಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಅವರಿಗೆ ಸ್ಲೋ ಓವರ್​ ರೇಟ್​ ಕಾರಣ ಬರೋಬ್ಬರಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಹೌದು, ಐಪಿಎಲ್​ 2023ನೇ ಆವೃತ್ತಿಯಲ್ಲಿ ಆರ್​​ಸಿಬಿ ತಂಡ ಎರಡನೇ ಬಾರಿಗೆ ಸ್ಲೋ ಓವರ್​ ರೇಟ್​​ ಹೊಂದಿದ್ದ ಕಾರಣಕ್ಕೆ ತಂಡದ ನಾಯಕರಾಗಿದ್ದ ವಿರಾಟ್​ ಕೊಹ್ಲಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಉಳಿದಂತೆ ತಂಡದ ಆಟಗಾರರು ಮತ್ತು ಇಂಪ್ಯಾಕ್ಟ್​ ಪ್ಲೇಯರ್​​​ಗೆ 6 ಲಕ್ಷ ರೂಪಾಯಿ ಅಥವಾ ಪಂದ್ಯದ ಶೇಕಡಾ 25 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಎರಡರಲ್ಲಿ ಯಾವುದು ಕಡಿಮೆ ಮೊತ್ತ ಇರುತ್ತೆ ಅದು ಅಟಗಾರರಿಗೆ ಅನ್ವಯ ಆಗಲಿದೆ.
ಏಪ್ರಿಲ್​ 23 ರಂದು ನಡೆದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಪಂದ್ಯದಲ್ಲಿ ಆರ್​ಸಿಬಿ ಸ್ಲೋ ಓವರ್​ ರೇಟ್​ ಹೊಂದಿತ್ತು. ಈ ಆವೃತ್ತಿಯಲ್ಲಿ ಇದಕ್ಕೂ ಮುನ್ನ ಫಾಫ್ ಡು ಪ್ಲೆಸಿಸ್​ ತಂಡದ ಕ್ಯಾಪ್ಟನ್​ ಆಗಿ ಲಕ್ನೋ ವಿರುದ್ಧ ಪಂದಯದಲ್ಲೂ ಸ್ಲೋ ಓವರ್ ರೇಟ್​ ಹೊಂದಿತ್ತು. ಪರಿಣಾಮ ಡು ಪ್ಲೆಸಿಸ್​ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಈ ಪಂದ್ಯದಲ್ಲಿ ಕೊನೆಯ ಎಸೆದದಲ್ಲಿ ಆರ್​​ಸಿಬಿ ತಂಡ ರೋಚಕ ಸೋಲುಂಡಿತ್ತು.

Share

Leave a Reply

Your email address will not be published. Required fields are marked *