ಮೂಡುಬಿದಿರೆ: ಯುಕೆಟಿಎಲ್ ಕಾಮಗಾರಿ ಎಗ್ಗಿಲ್ಲದೆ ಸಾಗುತ್ತಿದೆ. ನಿಡ್ಡೋಡಿ ಸಮೀಪದ ಮಿತ್ತ ಮಾಣಿಲದಲ್ಲಿ ಬೆಳೆದು ನಿಂತ ಭತ್ತದ ಗದ್ದೆಯ ಹುಣಿಯಲ್ಲಿ ಬೃಹತ್ ವೈರ್‌ಗಳು ಕೃಷಿ ನಾಶಕ್ಕೆ ಮುಂದಾಗಿದೆ.
ಬಾಲಕೃಷ್ಣ ಅಂಚನ್ ಎಂಬವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಟವರ್ ನಿರ್ಮಾಣವಾಗಿದ್ದು ಪಕ್ಕದ ಕೃಷಿ ಭೂಮಿಯಲ್ಲಿ ಲೈನ್ ಕಾಮಗಾರಿ ನಡೆದಿದೆ. ಅಂಚನ್ ಅವರ ಗದ್ದೆಯಲ್ಲಿ ಬೃಹತ್ ವಯರ್‌ಗಳನ್ನು ತಂದು ಹಾಕಲಾಗಿದೆ. ಈವರೆಗೂ ಪರಿಹಾರದ ಚೆಕ್ ವಿತರಣೆಯಾಗಿಲ್ಲ.

“ನಂಬಿಕೆ ಇಲ್ಲವೇ? ಒಂದು ವಾರದೊಳಗೆ ಕೊಡುತ್ತೇವೆ” ಎಂಬ ಉದ್ಧಟತನದ ಮಾತುಗಳನ್ನು ಕೆಂಪೆನಿಯ ವ್ಯಕ್ತಿಗಳು ಆಡುತ್ತಿದ್ದಾರೆ. ಅಂಚನ್ ಅವರು ಹಣ ನೀಡುವಂತೆ ಕೇಳಿಕೊಂಡರೂ ಪ್ರಯೋಜನವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಗದ್ದೆ ಹಾಗೂ ತೋಟದಲ್ಲಿ ಲೈನ್ ಹಾದುಹೋಗಲಿದ್ದು, ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಯೋಜನೆ ಅನುಷ್ಠಾನ ಆದ ಮೇಲೆ ಹಣ ಕೊಡುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ ಇದೆ ಎನ್ನುವ ಪ್ರಶ್ನೆ ಅವರದ್ದು. ಅಗ್ರಿಮೆಂಟ್ ಮಾಡಿಲ್ಲ. ಪ್ಲೇನ್ ಶೀಟ್‌ಗೆ ಸೈನ್ ಕೇಳುತ್ತಾರೆ. ಇಲ್ಲಿ ಯಾರೂ ನನ್ನ ಬೆಂಬಲಕ್ಕಿಲ್ಲ ಎಂಬ ಅಳಲು ಅವರದ್ದು. ಸ್ಥಳೀಯರ ಕೃಷಿಕರು, ಕೃಷಿ ಸಂಘಟನೆಗಳು ಈ ರೈತರ ಸಹಕಾರಕ್ಕೆ ಮುಂದಾಗಬೇಕಾಗಿದೆ.
