ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ. ಲಿ. ನೂತನ ಸ್ವಂತ ಕಚೇರಿ ಶುಭಾರಂಭ

ಮಂಗಳೂರು: ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಇದರ ನೂತನ ಸ್ವಂತ ಕಚೇರಿಯ ಉದ್ಘಾಟನಾ ಸಮಾರಂಭ ನಗರದ ಪಂಪ್ ವೆಲ್ ಕಪಿತಾನಿಯೋ ರಸ್ತೆಯ ಲೋಟಸ್ ಗ್ಯಾಲಕ್ಷ್ಮಿಯ ೨ ಜe ಮಹಡಿಯಲ್ಲಿ ನಡೆಯಿತು.
ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಮೊತ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಉದ್ಘಾಟಿಸಿ, ಇಂದಿನ ದಿನಗಳಲ್ಲಿ ಭೂವ್ಯವಹಾರಕ್ಕೆ ಸಂಬoಧಪಟ್ಟ ದಾಖಲಾತಿಗಳ ಒಟ್ಟುಗೂಡಿಸುವಿಕೆ ಹಾಗೂ ದಾಖಲಾತಿಗಳ ತಯಾರು ಮಾಡುವುದು ಅತ್ಯಂತ ಕ್ಲಿಷ್ಟಕರವಾಗಿದ್ದು ಕಚೇರಿಯಿದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಶನ್ಸ್ ಈ ಎಲ್ಲಾ ಕೆಲಸಗಳನ್ನು ಒಂದೇ ಕಡೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಶುಭ ಹಾರೈಸಿದರು.


ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ.ನ ಗೌರವ ಸಲಹೆಗಾರ ನೆರೋಳು ಈಶ್ವರ ಭಟ್, ದೀಪ ಪ್ರಜ್ವಲನೆಗೊಳಿಸಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಅವರು ನ್ಯಾಯವಾದಿ ಬಾಲಕೃಷ್ಣ ಶರ್ಮ ಅವರ ಲಾ ಛೇಂಬರ್ ಉದ್ಘಾಟನೆ ಮಾಡಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವೆಬ್‌ಸೈಟ್‌ನ ಅನಾವರಣಗೊಳಿಸಿ ಸಂಸ್ಥೆಗೆ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಕ್ಲಿಷ್ಟಕರವಾದ ದಾಖಲಾತಿಗಳನ್ನು ಸರಿಪಡಿಸುವಲ್ಲಿ ಭೂವ್ಯವಹಾರದ ಬಾಲಕೃಷ್ಣಶರ್ಮ ಅವರು ಪರಿಣಿತಿಯನ್ನು ಹೊಂದಿದ್ದು ಅವರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಇತ್ತೀಚೆಗೆ ಶಾರದಾಂಬಾ ಟ್ರಸ್ಟಿಗೆ ಭೂದಾನ ಮಾಡಿರುವುದನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾದ ವಕೀಲ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಉಪಸ್ಥಿತರಿದ್ದರು.
ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ. ಲಿ. ಇದರ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶರ್ಮಾ ನೆರೋಳು ಧೈಯೋದ್ದೇಶಗಳನ್ನು ವಿವರಿಸಿದರು. ನಿರ್ದೇಶಕ ಡಾ| ಭಾಗ್ಯ ಬಿ. ಶರ್ಮಾ ವಂದಿಸಿದರು. ಆರ್.ಜೆ. ಅಭಿಷೇಕ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರಿಗಳಾದ ೧೦ಕ್ಕೂ ಹೆಚ್ಚು ಗಣ್ಯರನ್ನು ಸಮಾನಿಸಲಾಯಿತು.
ಸಂಸ್ಥೆಯ ವತಿಯಿಂದ ಪಜೀರು ಗೋಸಂರಕ್ಷಣೆಗಾಗಿ ಗೋವನಿತಾಶ್ರಾಯ ಟ್ರಸ್ಟಿಗೆ ನಿಧಿಯನ್ನು ಈ ಸಂದರ್ಭದಲ್ಲಿನೆರೋಳು ಈಶ್ವರ ಭಟ್ ಸಮರ್ಪಿಸಿದರು.

Share

Leave a Reply

Your email address will not be published. Required fields are marked *