ಫೆಬ್ರವರಿ ೨೦: ಮೂಡುಬಿದಿರೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ೨೦ರಂದು ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ. ಶ್ರೀಪತಿ ಮಂಜನಬೈಲು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ ೮.೪೫ಕ್ಕೆ ಉದ್ಯಮಿ ಕೆ ಶ್ರೀಪತಿ ಭಟ್ ಸಾಂಪ್ರದಾಯಿಕ ಸ್ವಾಗತಕ್ಕೆ ಚಾಲನೆ ನೀಡುವರು. ತಹಶೀಲ್ದಾರ್ ಮುಕುಲ್ ಜೈನ್ ರಾಷ್ಟçಧ್ವಜ, ಕಸಾಪ ಜಿಲ್ಲಾಧ್ಯಕ್ಷ ಡಾ ಎಂ ಪಿ ಶ್ರೀನಾಥ್ ಪರಿಷತ್ತು ಧ್ವಜ, ಡಾ ಎಂ ಮೋಹನ ಆಳ್ವ ಕನ್ನಡ ಧ್ವಜಗಳನ್ನು ಅರಳಿಸಲಿದ್ದಾರೆ. ಉದ್ಯಮಿ ಡಾ ರಾಮಕೃಷ್ಣ ಆಚಾರ್ ಪ್ರದರ್ಶನ ಮಳಿಗೆಗಳಿಗೆ ಚಾಲನೆ ನೀಡುವರು.


ಶಾಸಕ ಉಮಾನಾಥ ಎ ಕೋಟ್ಯಾನ್ ಸಮ್ಮೇಳನ ಉದ್ಘಾಟಿಸುವರು. ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಶುಭಾಶಂಸನೆ ಗೈಯುವರು. ಈಶ್ವರ ಭಟ್, ಅಭಯಚಂದ್ರ ಜೈನ್, ಕುಲದೀಪ್ ಚೌಟ, ಎಂ ಬಾಹುಬಲಿ ಪ್ರಸಾದ್, ಯುವರಾಜ್ ಜೈನ್, ಪ್ರೊ ಮಹಾವೀರ ಅಜ್ರಿ, ತಿಮ್ಮಯ್ಯ ಶೆಟ್ಟಿ, ನಾರಾಯಣ ಪಿಎಂ, ಸಂಪತ್ ಸಾಮ್ರಾಜ್ಯ, ಧನಕೀರ್ತಿ ಬಲಿಪ, ಮುಕುಲ್ ಜೈನ್, ಇಂದು ಎಂ, ದಿನೇಶ್ ಆನಡ್ಕ, ಸಿ ಎಚ್ ಅಬ್ದುಲ್ ಗಫೂರ್, ಅಶ್ವಿನ್ ಪಿರೇರ, ಡಾ ಮುರಳೀ ಮೋಹನ ಚೂಂತಾರು, ಡಾ ಮಾಧವ ಎಂ ಸಹಿತ ಹಲವು ಮಂದಿ ಪಾಲ್ಗೊಳ್ಳುವರು.
ಕಸಾಪ ಮೂಡುಬಿದಿರೆ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಕೆ ಸ್ವಾಗತಿಸುವರು.
ಡಾ ಪುಂಡಿಕಾಯ್ ಗಣಪಯ್ಯ ಭಟ್ ಮೂಡುಬಿದಿರೆಯ ಗತಕಾಲದ ಹೆಜ್ಜೆಗುರುತುಗಳು ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡುವರು. ಮೂಡುಬಿದಿರೆಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಡಾ ಪ್ರಭಾತ್ ಬಲ್ನಾಡ್ ಮಾತನಾಡುವರು. ಮೂಡುಬಿದಿರೆ ಸಾಹಿತ್ಯ ಪರಂಪರೆಯ ಬಗ್ಗೆ ಡಾ ಅಜಿತ್ ಪ್ರಸಾದ್ ವಿಚಾರ ಮಂಡಿಸುವರು. ಮಕ್ಕಳ ಸಾಹಿತ್ಯ ಇಂದಿನ ಸವಾಲು ವಿಚಾರದಲ್ಲಿ ವಿಜಯಶ್ರೀ ಹಾಲಾಡಿ ಮಾತನಾಡುವರು. ಮೂಡುಬಿದಿರೆ ಶೈಕ್ಷಣಿಕ ಪರಂಪರೆಯ ಬಗ್ಗೆ ಅರವಿಂದ ಚೊಕ್ಕಾಡಿ ಮಾತನಾಡುವರು. ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಡಾ ಎಂ ಮೋಹನ ಆಳ್ವ ಸನ್ಮಾನಿಸುವರು. ಡಾ ನರೇಂದ್ರ ರೈ ದೇರ್ಲ ಸಮಾರೋಪ ಭಾಷಣ ಮಾಡುವರು. ಡಾ ಎಂ ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.

Share

Leave a Reply

Your email address will not be published. Required fields are marked *