MOODBIDRI :ಕೋಟ್ಯಾನ್‌ ಪರ ಹಿಂದೂ ಮುಖಂಡರ ಗಟ್ಟಿಧ್ವನಿ

ಕಾಂಗ್ರೆಸ್‌ ಅಪಪ್ರಚಾರಕ್ಕೆ ಸಿಡಿದೆದ್ದ ಹಿಂದೂ ಮುಖಂಡರು
ಮೂಡುಬಿದಿರೆ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಉಮಾನಾಥ ಎ ಕೋಟ್ಯಾನ್‌ ವಿರುದ್ದ ಸುಳ್ಳಿನ ರಾಜಕಾರಣವನ್ನು ಕಾಂಗ್ರೆಸ್‌ ಪಕ್ಷ ಮಾಡುತ್ತಿದೆ. ಚುನಾವಣೆಗೆ ಕ್ಷಣ ಗಣನೆ ನಡೆಯುತ್ತಿರುವಾಗ ಈ ರೀತಿಯ ಅಪಪ್ರಚಾರಗಳನ್ನು ಮಾಡಿ ಜನತೆಯ ಹಾದಿ ತಪ್ಪಿಸುವ ಕಾರ್ಯವನ್ನು ಕಾಂಗ್ರೆಸ್‌ ಪಕ್ಷ ಪ್ರಮುಖರು ಮಾಡುತ್ತಿರುವುದು ಶೋಭೆ ತರತಕ್ಕಂತಹುದಲ್ಲ. ಅಭಿವೃದ್ಧಿ ಪರವಾಗಿರುವ ಉಮಾನಾಥ ಕೋಟ್ಯಾನ್‌ ಪರವಾಗಿ ಸಮಾಜ ನಿಲ್ಲಬೇಕಾಗಿದೆ. ಅಭಿವೃದ್ಧಿ ಮಾಡುವ ಕೋಟ್ಯಾನ್‌ರಿಗೆ ಬೆಂಬಲಿಸುತ್ತಿದ್ದೇವೆ ಎಂದು ಬ್ರಾಹ್ಮಣ, ವಿಶ್ವಕರ್ಮ, ಜಿ.ಎಸ್.ಬಿ ಸಮುದಾಯದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ ನಿಲುವನ್ನು ಖಂಡಿಸಿದ್ದಾರೆ. ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಪತಿ ಭಟ್‌, ಉಮೇಶ್‌ ಪೈ, ಭಾಸ್ಕರ್‌ ಆಚಾರ್ಯ ಈ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಎಕ್ಸಲೆಂಟ್‌ ವಿದ್ಯಾಸಂಸ್ಥೆ ಕಲ್ಲಬೆಟ್ಟು ಮೂಡುಬಿದಿರೆ- ಪ್ರವೇಶಾರಂಭ – ಜಾಹೀರಾತು

ಜಾತಿ,ಧರ್ಮ,ಮತ,ಪಂಗಡಗಳ ಎಲ್ಲೆಗಳನ್ನು ಮೀರಿ ಸರ್ವ ಧರ್ಮೀಯರಿಗೂ ಬೇಕಾಗುವಂತಹ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ ಉಮಾನಾಥ ಕೋಟ್ಯಾನ್‌ ವಿರುದ್ಧ ನಡೆಯುವ ಅಪಪ್ರಚಾರ ಸಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಶ್ರೀಪತಿ ಭಟ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

 

ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‌ ಬ್ರಾಹ್ಮಣ ಸಮುದಾಯದ ಅರ್ಚಕ ವರ್ಗದವರಿಗೆ ಕರೆಮಾಡಿ, ಉಮಾನಾಥ ಕೋಟ್ಯಾನ್‌ ಬ್ರಾಹ್ಮಣ ಅರ್ಚಕರನ್ನು ಪೂಜೆಗೆ ನೇಮಿಸದೆ, ಬಿಲ್ಲವರ ʻಶಾಂತಿʼಯವರನ್ನು ಪೂಜೆಗೆ ನೇಮಿಸುತ್ತಿದ್ದಾರಂತೆ, ನಿಮ್ಮ ಓಟು ಅವರಿಗೆ ಬೇಡವಂತೆ ಎಂದು ಜನತೆಯ ಹಾದಿ ತಪ್ಪಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ಸಮುದಾಯ ಮುಖಂಡರು ಆರೋಪಿಸಿದ್ದಾರೆ. ವಿಶ್ವಕರ್ಮ ಹಾಗೂ ಇತರೆ ಸಮುದಾಯದವರಿಗೂ ಈ ರೀತಿಯ ಕರೆಗಳು ಹೋಗುತ್ತಿದ್ದು, ಸಮಾಜದಲ್ಲಿ ಮೇಲ್ವರ್ಗದಲ್ಲಿರುವ ಬ್ರಾಹ್ಮಣ, ವಿಶ್ವಕರ್ಮ, ಜಿ.ಎಸ್.ಬಿ ಸಮುದಾಯದ ಪೌರೋಹಿತ್ಯ ವರ್ಗದವರನ್ನು ಟಾರ್ಗೆಟ್‌ ಮಾಡಿ, ಮತಹಾಳು ಮಾಡುವ ಷಡ್ಯಂತ್ರ ಕಾಂಗ್ರೆಸ್‌ನಿಂದ ನಡೆಯುತ್ತಿದೆ ಎಂದರು. ಉದ್ಯಮಿ ಆರ್.ಕೆ.ಭಟ್‌, ಎಂ.ಕೆ.ಬಾಲಕೃಷ್ಣ ಆಚಾರ್ಯ, ರಾಘವೇಂದ್ರ ಪ್ರಭು, ಶಾಂತಾರಾಮ ಕುಡ್ವ, ರಾಜೇಶ್‌ ಮಲ್ಯ, ಅರವಿಂದ ಆಚಾರ್ಯ, ಹರಿಶ್ಚಂದ್ರ ಆಚಾರ್ಯ ಸೇರಿದಂತೆ ಸಮಾಜದ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.

Share

Leave a Reply

Your email address will not be published. Required fields are marked *