ಯುಕೆಟಿಎಲ್: ಜನರಿಗೆ ಸರಿಯಾದ ಪರಿಹಾರ ಸಿಗಲಿ

MANGALURU: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ: ಯು.ಟಿ ಖಾದರ್

ಅವಶ್ಯಕತೆ ಇರುವಲ್ಲಿಗೆ ವಿದ್ಯುತ್‌ ಮಾರಾಟ: ಸ್ಪೀಕರ್‌ ಅಭಿಮತ

ಮಂಗಳೂರು: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ. ಸರಕಾರ ಬದಲಾದರೂ ಜನೋಪಕಾರಿ ಅಭಿವೃದ್ಧಿ ಯೋಜನಗೆಳು ಯಾವುದೇ ತಡೆಯಿಲ್ಲದೆ ಮುಂದುವರಿಯುತ್ತವೆ. ನಮ್ಮ ಸರಕಾರ ಅಭಿವೃದ್ಧಿಪರವಾಗಿದೆ ಎಂದು ಮಂಗಳೂರು ಶಾಸಕ ಹಾಗೂ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹೇಳಿದರು.
ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಎರಡನೇ ಬಾರಿಗೆ ನಗರಕ್ಕೆ ಭೇಟಿ ನೀಡಿದ ಅವರು, ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಯ ಜತೆ ಮಾತನಾಡಿದರು.